ಆಂಗೀರಸ್
ಮಹರ್ಷಿ ಅಂಗಿರಸ್‍ನ ಪುತ್ರ. ಈತನೂ ದೇವತೆಗಳ ಪರೋಹಿತ.  ದೇವಗುರುವಾದ ನಾಮಾಂತರ ಎಂದೂ ಕೆಲವರ ಅಭಿಪ್ರಾಯ. ಆಂಗೀರಸರಲ್ಲಿ ಮುಖ್ಯರಾದವರು ಮಾರ್ಕಂಡೇಯ, ಬೃಹಸ್ಪತಿ, ಉತತ್ಯ, ದೀರ್ಘ ತಮಸ್, ಕೃಷ್ಣನ ಗುರುವಾದ ಘೋರ ಮುಂತಾದವರು. ಇವರು ವಂಶಪಾರಂಪರ್ಯವಾಗಿ ವೈಶಾಲಿ ಮತ್ತು ವಿದೇಹ ರಾಜರ ಪುರೋಹಿತರಾಗಿದ್ದರೆಂದು ತಿಳಿದುಬಂದಿದೆ.  

	ಸಪ್ತರ್ಷಿ ಮಂಡಲ (ಅರ್ಸಾ ಮೇಜರ್) ನಕ್ಷತ್ರಪುಂಜದಲ್ಲಿ ಆಂಗೀರಸ್ಸು ಒಂದು ನಕ್ಷತ್ರ (ಂಟioಣh). ಮುರಿದ ಹಿಡಿಯ ಸೌಟಿನ ಆಕಾರದಲ್ಲಿ ಇರುವ ಏಳು ನಕ್ಷತ್ರಗಳ ಈ ಪುಂಜದಲ್ಲಿ ಹಿಡಿಯಲ್ಲಿ ಮೂರನೆಯ ನಕ್ಷತ್ರ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ